Hit the Courts and Show Your Skills
September 07th, 2025 | 7am to 1pm
Liberty Park, 19211, Studebaker Rd, Cerritos, CA 90703
KCA Members ONLY
Doubles ONLY
Men’s, Women’s, and Mixed Doubles
Youth, Adult & Senior Divisions
Trophies and Certificates for Winners & Runners-Up
Refreshments for participants!
Entry Fee: $20
All skill levels welcome – from beginners to advanced
Participants must bring their own rackets
USTA rules apply
Fun, friendly, and competitive atmosphere!
Contact:
muraliahanya@socalkca.com (310) 8179881
yogesh@socalkca.com (425) 314 7010
rudreshamurthy@socalkca.com (424) 345 6682
mahesh@socalkca.com (949) 310 4165
ನಮ್ಮೂರಿನ ಗಣೇಶೋತ್ಸವ
ಹೊಸದಾಗಿ ಆಯ್ಕೆಯಾದ ಕೆಸಿಎ ಅಧ್ಯಕ್ಷ ಮುರಳಿ ಬಿ.ಎಲ್. ಅವರ ನೇತೃತ್ವದಲ್ಲಿ ನಮ್ಮೂರಿನ ಗಣೇಶೋತ್ಸವವನ್ನು ತುಂಬಾ ಲವಲವಿಕೆಯಿಂದ, ಅದ್ಧುರಿಯಾಗಿ ನಡೆಸಲಾಯಿತು ಹಾಗು ಈ ಕಾರ್ಯಕ್ರಮ ಅನೇಕ ವಿಷಯಗಳಲ್ಲಿ ಓಂ ಪ್ರಥಮ ಕೂಡ ಹಾಡಿತು.
ಕೆಸಿಎ ವತಿಯಿಂದ ಹಬ್ಬವನ್ನು ಶನಿವಾರ ಆಗಸ್ಟ್ ೩೦ನೆ ತಾರೀಕು ೩ ಗಂಟೆಗೆ ಆಯೋಜಿಸಲಾಗಿತ್ತು. ಸರಿ ಸುಮಾರು ೩ ಗಂಟೆಗೆ ಕಾರ್ಯಕ್ರಮದ ರಿಜಿಸ್ಟ್ರೇಷನ್ ಪ್ರಕ್ರಿಯೆ ಶುರುವಾಯಿತು. ಕೆಸಿಎಯಾ ಖಜಾಂಚಿಯಾದ ದಿವ್ಯಾನಂದ, ರುದ್ರೇಶ್ ಮೂರ್ತಿ ಹಾಗು ಅವರ ತಂಡ ಈ ಕೆಲಸವನ್ನು ಸಮರ್ಪಕವಾಗಿ, ಸುಸೂತ್ರವಾಗಿ ನಗುಮೊಗದಿಂದ ನೆರವೇರಿಸಿದರು. ಬಂದವರಿಗೆಲ್ಲರಿಗೂ ನಮ್ಮ ಕೂಟದ ಪತ್ರಿಕೆಯಾದ ಸಂಗಮದ ಜೊತೆ, ಮೈಸೂರಿನ ಕಜ್ಜಾಯ ಮನೆಯಿಂದ ತರಿಸಿದ ಸಜ್ಜಪ್ಪವನ್ನು ಪ್ಯಾಕ್ ಮಾಡಿ ವಿತರಿಸಿದರು.
ಮೊದಲನೆಯದಾಗಿ, ಕೆಸಿಎಯ ಇತಿಹಾಸದಲ್ಲಿಯೇ, ಗಣಪತಿ ಹಬ್ಬದ ಆಚರಣೆಯನ್ನು ಮೊಟ್ಟ ಮೊದಲ ಬಾರಿಗೆ ಭವ್ಯವಾದ ಸ್ವಾಮಿ ನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆಸಲಾಯಿತು. ಎರಡನೆಯದಾಗಿ, ೪೪೫ ಹೆಚ್ಚು ಕನ್ನಡಿಗ ಭಕ್ತಾದಿಗಳು ಬಂದು ಹಬ್ಬವನ್ನು ಉತ್ಸವವನ್ನಾಗಿಸಿ, ವಿಜೃಂಭಣೆಯಿಂದ ಆಚರಿಸಿದರು. ಇಲ್ಲಿಯವರೆಗೂ ನಡೆದ ಕೆಸಿಎಯ ಕಾರ್ಯಕ್ರಮಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಕಾರ್ಯಕ್ರಮಗಳಲ್ಲಿ, ಇದೂ ಒಂದು ಎಂದು ಗುರುತಿಸಿಕೊಂಡಿತು. ಎಲ್ಲದಕ್ಕಿಂತ ಮುಖ್ಯವಾಗಿ ಈ ಬಾರಿಯ ನಮ್ಮ ಗಣಪ ಮೂರು ಅಡಿಗೂ ಮೀರಿ ಇದ್ದ.
ಕೂಟದವರೇ ಆದ ವಿಜಯೇಂದ್ರ ಕುಮಾರ್ ಅವರು ಕೈಯಲ್ಲೇ ಸುಂದರವಾಗಿ ನಿರ್ಮಿಸಿದ ಗಣೇಶನನ್ನು, ಅವರ ಮನೆಯಿಂದ ಸುಭಾಷ್ ಮೈಸೂರು ಮತ್ತು ಅವರ ತಂಡದವರು ಶುಕ್ರವಾರವೇ ಮಂದಿರಕ್ಕೆ ಜೋಪಾನವಾಗಿ ತಂದು ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದರು.
ದಿನದ ಕಾರ್ಯಕ್ರಮವನ್ನು ಕೆಸಿಎಯ ಸೆಕ್ರೆಟರಿ ಸುಷ್ಮಾ ಚಾರ್ ಅವರು ಆತ್ಮೀಯಯಾಗಿ ಸ್ವಾಗತ ಕೋರುವುದರ ಮೂಲಕ ಶುರು ಮಾಡಿದರು. ನಂತರ ನೂತನ ಅಧ್ಯಕ್ಷರಾದ ಮುರಳಿ ಬಿ.ಎಲ್. ಅವರು ಅಲ್ಲಿ ಬಂದಂತಹ ಕನ್ನಡಿಗರಿಗೆ ಉತ್ಸಾಹದಿಂದ ತಮ್ಮ ಎಗ್ಸಿಕ್ಯುಟಿವ್ ಬೋರ್ಡ್ ಹಾಗು ಬೋರ್ಡ್ ಒಫ್ ಡೈರೆಕ್ಟರ್ಸ್ಗಳ ಪರಿಚಯ ಮಾಡಿಕೊಟ್ಟು, ಮುಂಬರುವ ದಿನಗಳಲ್ಲಿ ತಾವು ಹಾಗು ತಮ್ಮ ತಂಡ ಮಾಡಲು ಉದ್ದೇಶಿಸಿರುವ ಹಲವು ಬದಲಾವಣೆಗಳನ್ನು ಕುರಿತು ಸಂಭ್ರಮದಿಂದ ತಿಳಿಸಿದರು. ಎಲ್ಲಾ ವಯಸ್ಸಿನವರನ್ನು ಒಳಗೊಂಡಿರುವ ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲರನ್ನು ಬೆಸೆದು, ಒಟ್ಟಿಗೆ ಮುನ್ನಡೆಸುವ ಬಗೆ ಕೂಡ ಉಲ್ಲಾಸದಿಂದ ಹಂಚಿಕೊಂಡರು. ಕೇಳುಗರಲ್ಲೂ ಹೊಸತನದ ನಿರೀಕ್ಷೆ ತಾನೇ ತಾನಾಗಿ ಮೂಡಿತು.
ಆ ನಂತರವೆಲ್ಲ ನಮ್ಮ ಗಣಪನದೇ ಹವಾ...
ಜಯ ಜಯ ಗಣಪತಿ ಎಂದು ಮಂಜುಳಾ ಗುರುರಾಜ್ ಅವರ ಶಿಷ್ಯೆಯಾದ ಸಿಂಚನ ಕಿರಣ್ ಗೌಡ ಸುಶ್ರಾವ್ಯವಾಗಿ ಹಾಡಿ ಗಣಪತಿಯ ಪೂಜೆಗೆ ಓಂಕಾರ ಹೇಳಿದರೇ, ದೀಪ ಶ್ರೀನಿ ಅವರ ನೇತೃತ್ವದಲ್ಲಿ ತಯಾರಾದ ಸುಮಾರು ೧೪ ಮಕ್ಕಳು ಜಯ ಗೌರಿ, ಜಯ ಗೌರಿ, ಮಂಗಳ ಗೌರಿ ಎಂದು ಸ್ವರ್ಣ ಗೌರಿಯನ್ನು ಸ್ತುತಿಸಿ, ಗಣಪತಿ ಗುಣಮಣಿ ನಮೋ ನಮೋ ಎಂದು ಭಕ್ತಿಯಿಂದ ಏಕ ಕಂಠದಲ್ಲಿ ಹಾಡಿದರು.
ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು. ಸುಷ್ಮಾರ ಚಾರ್ ಅವರ ತಂಡ ಪೂಜಾ ಮಂಟಪದ ಅಲಂಕಾರವನ್ನು ವಹಿಸಿಕೊಂಡರೆ, ಪೂಜೆಗೆ ಅಣಿಗೊಳಿಸಿದ್ದು ಅರವಿಂದ್ ರಾಜೇಶ್ವರಿ, ಸವಿತಾ, ಮಧು, ಮನು ಮತ್ತು ಭಾರತಿಯವರು , ಇವರಿಗೆ ಹೆಜ್ಜೆ ಹೆಜ್ಜೆಗೂ ನೆರವಾಗಿ, ನೈವೇದ್ಯವನ್ನು ತಯಾರಿಸಿದವರು ಅನು ಮೇಲುಕೋಟೆ ಮತ್ತು ವೀಣಾ ಕೃಷ್ಣ ಅವರು.
ನಂತರ ಅರ್ವೈನ್ ಮಂದಿರದ ಅರ್ಚಕರಾದ ಕನ್ನಡಿಗ ಲಕ್ಷೀಪತಿಯವರ ನಿರ್ದೇಶನದಲ್ಲಿ ದೊಡ್ಡ ಗಣಪತಿಗೆ ಬಲವಂತ್ ಸಾಸನೂರ್ ಹಾಗು ಭಾರತಿ ಸಾಸನೂರ್ ದಂಪತಿ ಭಕ್ತಿಯಿಂದ ಪೂಜೆ ಸಲ್ಲಿಸಿದರೆ, ಪೂಜೆಗೆ ನೊಂದಾಯಿಸಿಕೊಂಡ ಸುಮಾರು ೫೦ಕ್ಕೂ ಹೆಚ್ಚು ಭಕ್ತಾದಿಗಳು, ಕೆಸಿಎ ತಂಡದವರು ತಮಗಿತ್ತ ಗಣಪನಿಗೆ ವಿಧಿವತ್ತಾಗಿ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.
ಪೂಜೆಯ ನಂತರ, ನಮ್ಮ ಕೂಟದ ಕೂಸೇ ಆಗಿರುವ ಅನೀಶ್ ವಸಿಷ್ಠ ಸ್ಯಮಂತೋಪಾಖ್ಯಾನವನ್ನು ಆಂಗ್ಲ ಮಿಶ್ರಿತ ಕನ್ನಡದಲ್ಲಿ ಸುಂದರವಾಗಿ ವಿವರಿಸಿದ. ಕಥೆಯನ್ನು ಹೇಳುವ ಮೊದಲೇ ಎಚ್ಚರದಿಂದ ಕೇಳಿ, ಮಧ್ಯೆ ಎಲ್ಲಿ ಬೇಕಾದರೂ ಪ್ರಶ್ನೆ ಕೇಳುತ್ತೇನೆ ಎಂದು ತಿಳಿಸೇ ಶುರು ಮಾಡಿದ್ದ. ಮಧ್ಯೆ ಮಧ್ಯೆ ತನ್ನದೇ ಧಾಟಿಯಲ್ಲಿ ಪ್ರೇಕ್ಷಕರನ್ನು ಪ್ರಶ್ನೆಗಳನ್ನು ಕೇಳಿ ಅವರುಗಳನ್ನು ತೊಡಗಿಸಿಕೊಂಡಿದ್ದು ಕೂಡ ವಿಶೇಷವಾಗಿತ್ತು.
ಯೂನಿವರ್ಸಿಟಿ ಒಫ್ ಸೌಥೆರ್ನ್ ಕ್ಯಾಲಿಫೋರ್ನಿಯಾದಲ್ಲಿ ಪ್ರೊಫೆಸರ್ ಆಗಿರುವ ಸೂರ್ಯಪ್ರಕಾಶ್ ಅವರು, ಈ ವರ್ಷ ಹೈ ಸ್ಕೂಲ್ನಲ್ಲಿ ಗ್ರ್ಯಾಜುಯೆಟ್ ಆದ ಮಕ್ಕಳಿಗೆ ದೇವರ ಬಳಿ ಇಟ್ಟು ಪೂಜೆ ಮಾಡಿಸಿದ ಸರ್ಟಿಫಿಕೇಟ್ಗಳನ್ನು ವಿತರಿಸಿ, ಆಶೀರ್ವದಿಸಿದರು. ಈ ಕಾರ್ಯದಲ್ಲಿ ಮುರುಳಿ ಅಹನ್ಯ ಮತ್ತು ಅರವಿಂದ್ ಸ್ವಾಮಿ ನೆರವಾದರು.
ಈ ಅದ್ಭುತ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕೊಡುಗೈ ದಾನಿಗಳಾದ ಶ್ರೀ.ಮೈಕ್ ಮಲ್ಲಪ್ಪ, ಅಮೃತ ಬಸವಾಪಟ್ಟಣ, ಬಲವಂತ್ ಸಾಸನೂರ್, ಡಾ. ಶೋಭಾ ಗೋವಿಂದ್ ಅವರು, ಪೂಜೆಗಳಿಗೆ ನೊಂದಾಯಿಸಿಕೊಂಡವರು ಹಾಗು ಕಾರ್ಯಕ್ರಮದಲ್ಲಿ ತಮಗೆ ಇಷ್ಟವಾದ ಕಾರ್ಯಗಳಿಗೆ ಧನ ಸಹಾಯ ಮಾಡಿದಂತವರಿಗೂ ಮುರಳಿ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಪೂಜೆ, ಕಥಾ ಶ್ರವಣ, ಮಕ್ಕಳ ಅಭಿನಂದನೆ, ದಾನಿಗಳಿಗೆ ಧನ್ಯವಾದರ್ಪಣೆ ಆದ ನಂತರ ಮಹಾಮಂಗಳಾರತಿ ನೆರವೇರಿತು.
ನಂತರ ಬಂದವರೆಲ್ಲರಿಗೂ ಟೀ, ಕಾಫಿ, ಗುಜರಾತಿ ಸ್ಟೈಲ್ಲೀನ ದಾಲ್ ವಾಡಾವನ್ನು ವಿತರಿಸುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಮೆರವಣಿಗೆಗಾಗಿ ದೊಡ್ಡ ಗಣಪತಿಯನ್ನು ರಥಕ್ಕೆ ಹುಷಾರಾಗಿ ಒಯ್ಯಲ್ಪಟ್ಟಿತು.
ಮೆರವಣಿಗೆಯು ಕೂಡ ಈ ದಿನದ ಮುಖ್ಯ ಅಂಶವೇ ಆಗಿತ್ತು. ಮೆರವಣಿಗೆಗಾಗಿ ೧ ಮುಖ್ಯ ಹಾಗು ೫ ಚಿಕ್ಕ ರಥಗಳನ್ನು ತಯಾರಿಸಲಾಗಿತ್ತು. ೧೨ ಅಡಿ ಎತ್ತರದ ಅಮೋಘವಾದ ರಥದ ಸಂಪೂರ್ಣ ವಿನ್ಯಾಸ , ರಚನೆ ಮತ್ತು ನಿರ್ಮಾಣವನ್ನು ಕೂಟದ ವೈಸ್ ಪ್ರೆಸಿಡೆಂಟ್ ಆದ ಹೇಮಂತ್ ಕುಮಾರ್ ಅವರು ಮಾಡಿದ್ದರು. ಚಿಕ್ಕ ರಥಗಳನ್ನು ಕಾರ್ಯಕರ್ತರಾದ ಸುದು ಚಲನ್, ಮನ್ಮಥ್, ಸುಮಂತ್, ಶಾಂತಲಾ ಅಹನ್ಯ ಹಾಗು ರಂಗಧ್ವನಿ ತಂಡ ನಿರ್ಮಿಸಿದ್ದರು. ನಮ್ಮ ದೊಡ್ಡ ಗಣಪತಿಯನ್ನು ಮುಖ್ಯವಾದ ದೊಡ್ಡ ರಥದಲ್ಲಿ ಕೂರಿಸಿ, ಇನ್ನಿತರ ಚಿಕ್ಕ ಗಣಪತಿಗಳನ್ನು ಚಿಕ್ಕ ಚಿಕ್ಕ ರಥಗಳಲ್ಲಿ ಕೂರಿಸಿದ್ದರು.
ಮೆರವಣಿಗೆಗೆ ಮೊದಲು ರಥಕ್ಕೆ ಮುರುಳಿ ಬಿ.ಎಲ್. ಅವರು ಈಡುಗಾಯಿಯನ್ನು ಒಡೆದು ಮೆರವಣಿಗೆಗೆ ಸಾಂಪ್ರದಾಯಕವಾಗಿ ಚಾಲನೆಯನ್ನು ನೀಡಿದರು. ೧೫ ಟೆಸ್ಲಾ ಕಾರ್ಗಳನ್ನು, ೫ ಗಣಪನ ಭಕ್ತಿಗೀತೆಗಳ ವಾದ್ಯಸಂಗೀತಕ್ಕೆ ಪ್ರೋಗ್ರಾಮ್ ಮಾಡಿದ್ದವರು ದಿವ್ಯಾನಂದ ಅವರು. ಮೆರವಣಿಗೆಯಲ್ಲಿ ತೇಜಸ್ವಿನಿ ವಿಜಯೇಂದ್ರ ಅವರ ನಿರ್ದೇಶನದಲ್ಲಿ ಮಕ್ಕಳು ಗಣೇಶ, ಕಾರ್ತಿಕೇಯ , ಶಿವ ಪಾರ್ವತೀ, ಕುಬೇರ, ಗಂಗೆಯಾಗಿ ಪಾಲ್ಗೊಂಡರು. ಗೊರವರಾಗಿ ವಿಜಯ ಲಕ್ಕಶೆಟ್ಟಿ, ಅರವಿಂದ್ ಅಪ್ಪಾಜಪ್ಪ, ವೀರಗಾಸೆಯವರಾಗಿ ಕಿರಣ್ ಗೌಡ ಅವರು ಪಾಲ್ಗೊಂಡರು. ವಿಂಟೇಜ್ ಕಾರ್ನಲ್ಲಿ, ಮುರಳಿ ಬಿ.ಎಲ್. ಅವರ ಸಾರಥ್ಯದಲ್ಲಿ ಕೃಷ್ಣದೇವರಾಯರಾಗಿ ಡಾ. ರಮೇಶ್ ಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿ ಸುದರ್ಶನ್ ಮೇಲುಕೋಟೆಯವರು ಕಂಗೊಳಿಸುತ್ತಿದ್ದರು. ಮರಾಠಿ ಮಂಡಳಿಯವರ ನಾದಬ್ರಹ್ಮ ತಾಷಾ ಡೋಲ್ ತಂಡದ ಹೈ ಎನರ್ಜಿ ತಾಳಕ್ಕೆ ಅಂದು ಕುಣಿಯದೆ ಇದ್ದವರೇ ಇಲ್ಲ ಎಂದರೆ ನೀವು ನಂಬಲೇಬೇಕು. ಅಲ್ಲಿ ನೆರದಿದ್ದವರೆಲ್ಲರಿಗೂ ಭಾರತದಲ್ಲಿನ ತಮ್ಮ ಬಾಲ್ಯದ ಗಣಪತಿ ಮೆರವಣಿಗೆ ನೆನಪಾಗಿದ್ದು ಅಷ್ಟೇ ಸತ್ಯ.. ಸುಮಾರು ಅರ್ಧ ಮೈಲಿ ಮೆರವಣಿಗೆ ಮುಗಿದರೂ ಡೋಲ್ ನವರಿಗೂ ನಿಲ್ಲಿಸೋ ಮನಸಿಲ್ಲ, ಜನರಿಗೂ ಅಲ್ಲಿಂದ ತೆರಳಲು ಮನಸ್ಸಿಲ್ಲ. ಹೀಗೆ ಅವರ ತಾಳಕ್ಕೆ ಇವರು, ಇವರ ಕುಣಿತದ ಶೈಲಿಗೆ ಅವರ ತಾಳ... ಹೀಗೆ ಬಹಳ ಹೊತ್ತು ನಡೆದು ನಂತರ ಗಣೇಶ ಬಂದ, ಕಾಯಿಕಡುಬು ತಿಂದ, ದೊಡ್ಡ ಕೆರೇಲಿ ಬಿದ್ದ ಚಿಕ್ಕ ಕೆರೆಯಲ್ಲಿ ಎದ್ದ ಎಂದು ಹಾಡುತ್ತ ಗಣಪತಿಯನ್ನು ಮುಂದಿನ ವರ್ಷ ಮತ್ತೆ ಬಾ ಎಂದು ಪ್ರೀತಿಪೂರ್ವಕವಾಗಿ ಕೇಳಿಕೊಡುತ್ತ ವಿಸರ್ಜನೆ ಮಾಡಲಾಯಿತು. ಎಲ್ಲಾ ಗಣಪತಿಗಳ ವಿಸರ್ಜನೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟವರು ಪ್ರಕಾಶ್ ರೆಡ್ಡಿ ಮತ್ತು ಬೋರ್ಡಿನವರೇ ಆದ ಯೋಗೇಶ್ ಮಲ್ಲೇಶ್.
ಅಷ್ಟೆಲ್ಲ ಕುಣಿದು ಕುಪ್ಪಳಿಸಿದ ಮೇಲೆ ಸುಗ್ರಾಸ ಭೋಜನವಾಗಲೇ ಬೇಕಲ್ಲ, ಸ್ವಾಮಿ ನಾರಾಯಣ ಮಂದಿರದವರ ಜೊತೆಗೆ ನಮ್ಮ ಕೂಟದವರೇ ಆದ ಗೋಪಾಲ್ ಶ್ರೀನಾಥ್, ನರೇನ್, ಸುರೇಶ ಸುಬ್ರಮಣ್ಯ ಅವರು ಕೈಜೋಡಿಸಿ ದಕ್ಷಿಣ ಭಾರತದ ನಳಪಾಕವನ್ನೇ ಇಳಿಸಿದ್ದರು. ಅಂದಿನ ಊಟದಲ್ಲಿ ಜಿಲೇಬಿ, ದಾಲ್ ವಡಾ,ಪೂರಿ, ಆಲೂಗೆಡ್ಡೆ ಪಲ್ಯ, ಹುರಳಿಕಾಯಿ ಪಲ್ಯ, ಮಾವಿನ ಕಾಯಿ ಚಿತ್ರಾನ್ನ, ಅನ್ನ, ತರಕಾರಿ ಹುಳಿ, ಉಸ್ಲಿ, ಮೊಸರನ್ನ, ಹಪ್ಪಳ ಉಪ್ಪಿನಕಾಯಿಯನ್ನು ಒಳಗೊಂಡಿತ್ತು. ಊಟದ ಉಸ್ತುವಾರಿ ವಹಿಸಿದ್ದ ಮಹೇಶ್ ಅಲಂಪಲ್ಲಿ ಅವರು, ಯಾವ ಕುಂದು ಕೊರತೆಯು ಇಲ್ಲದಂತೆ ಅಚ್ಚುಕಟ್ಟಾಗಿ ನಿಭಾಯಿಸಿದರು.
ಈ ಎಲ್ಲಾ ಸಡಗರ ಸಂಭ್ರಮವನ್ನು ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ದಿನೇಶ್ ಹರ್ಯಾಡಿಯವರು ಸೆರೆ ಹಿಡಿದರೆ, ಪ್ರಕಾಶ್ ರೆಡ್ಡಿಯವರು ಡ್ರೋನಿನ ಮೂಲಕ ಸೆರೆ ಹಿಡಿದರು.
ಈ ಬಾರಿಯ ಕೆಸಿಎ ತಂಡದ ಈ ಕಾರ್ಯಕ್ರಮ, ಮುಂಬರುವ ಎಲ್ಲಾ ಕಾರ್ಯಕ್ರಮಗಳಿಗೂ ಒಂದು ಮಾನದಂಡವಾಗಿ ಉಳಿಯುತ್ತದೆ ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹೊರಟವರೆಲ್ಲರ ಮನದಲೆಲ್ಲ ಸಡಗರ, ಸಂಭ್ರಮದ ಜೊತೆಗೆ ಭಾರತದ ಬೀದಿ ಗಣಪನ ಮೆರವಣಿಗೆಯಲ್ಲಿ ಭಾಗವಹಿಸಿದಷ್ಟೇ ಆನಂದ, ಸಂತೃಪ್ತಿ, ದೈವಿಕತೆ ತುಂಬಿತ್ತು.
ಉಮಾ ರಾಮಸ್ವಾಮಿ
On behalf of the Southern California Karnataka Cultural Association (SoCal KCA) Board of Directors for the 2025-2027 term, we cordially invite all members and prospective members to attend a special event.
ನಮ್ಮೂರ ಗಣಪ ॥ ಹಾಲಿವುಡ್ ನೆಲದಲ್ಲಿ
Join us at BAPS Temple in Chino Hills on August 30th from 3:00 PM to 8:00 PM as we host the SoCal Hollywood Ganesha festivities.
Registration Details: We encourage all interested individuals to register promptly to take advantage of our early bird offer. Please note that spots are limited, and registration will be accepted on a first-come, first-served basis. Not a member yet? We invite you to join our community and experience the warmth of being part of SoCal KCA.
Event Information: For more details about the event, participate, engage, Ganesha Chariot making, sponsor, please watch our promotional video and accompanying flyer .
We look forward to your participation and making this celebration a memorable one.
Best regards,
SoCal KCA Board of Directors (2025-2027)
August 30th, 2025 | 3pm to 8pm
BAPS Swaminarayan Mandir, Chino Hills, CA
KCA-SC Grand Ganeshothsava 2025 Celebration! Introducing Special Pooja, Donor Packages and General Entry. Join us for a peaceful and divine experience!
Book now via Zeffy Link. Limited spots - reserve early!
https://www.zeffy.com/en-US/ticketing/kca-ganeshotsava--2025
August 30th, 2025
BAPS Swaminarayan Mandir, Chino Hills, CA
KCA-SC Grand Rathotsava (The Charioteer Challege)
Design, build and bring your Ratha/Chariot for Grand Visarjaney.
Can't build a Chariot! Support the event as a sponsor.
Book now via Zeffy Link. Limited spots - reserve early!
https://www.zeffy.com/en-US/ticketing/kca-ganeshotsava--2025
August 30th, 2025 | 3pm to 8pm
BAPS Swaminarayan Mandir, Chino Hills, CA
KCA-SC Grand Ganeshothsava 2025 Celebration! Introducing Special Pooja, Donor Packages and General Entry. Join us for a peaceful and divine experience!
Book now via Zeffy Link. Limited spots - reserve early!
https://www.zeffy.com/en-US/ticketing/kca-ganeshotsava--2025