Karnataka Cultural Association of Southern California (SocalKCA)
ಕರ್ನಾಟಕ ಸಾಂಸ್ಕ್ರತಿಕ ಸಂಘ - ದಕ್ಷಿಣ ಕ್ಯಾಲಿಫೋರ್ನಿಯಾ
Upcoming Event
Past Events
Volleyball Tournament 2022
Bombe Habba 2022
Oct 13th, 2022
Click here for video of the event
Tennis Tournament 2022
Ganeshotsava 2022
Sept 10th, 2022
Click here for photos of the event
Ganesha Idol Workshop 2022
Aug 27th and 28th, 2022
Summer Picnic 2022
July 31st, 2022
Ugadi 2022
April 24th, 2022
Jagannath Shankam Memorial Natakotsava March 27, Sunday 2022 - ಜಗನ್ನಾಥ ಶಂಕಂ ಸ್ಮಾರಕ ನಾಟಕೋತ್ಸವ ೨೦೨೨ ಮಾರ್ಚ್ 27, ಭಾನುವಾರ
ನಮಸ್ಕಾರ
ನಾಟಕೋತ್ಸವ ೨೦೨೨ ಕಾರ್ಯಕ್ರಮ ವು ಮಾರ್ಚ್ ೨೭, ೨೦೨೨ರಂದು ಲಾಂಗ್ ಬೀಚ್ ನ ಕ್ಯಾಬ್ರಿಲ್ಲೊ ಹೈಸ್ಕೂಲ್ ನಲ್ಲಿ ನಡೆಯಿತು. ಸದಸ್ಯರ ಬಹು ಬೇಡಿಕೆಯ ಈ ಕಾರ್ಯಕ್ರಮವು ಎಲ್ಲಾ ಸದಸ್ಯರನ್ನು ಸಂತೋಷಪಡಿಸಿತೆಂದು ಭಾವಿಸಿದ್ದೇವೆ. ನಾಟಕೋತ್ಸವವನ್ನು ೨೭೦ಕ್ಕೂ ಹೆಚ್ಚು ಸದಸ್ಯರು ಆನಂದಿಸಿದರು.
ತೀರ್ಪುಗಾರರು ಆಯ್ಕೆ ಮಾಡಿದ ೪ ವಿಭಿನ್ನ ನಾಟಕಗಳು ಪ್ರದರ್ಶನ ಗೊಂಡವು,
· ಮುರಳಿ B.L. ಅವರು ನಿರ್ದೇಶಿಸಿದ ಮೋಕ್ಷ ೨.೨
· ಪವನ್ ಜಾನಕಿರಾಮ್ ಅವರು ನಿರ್ದೇಶಿಸಿದ ಅಷ್ಟು ಸುಲಭ ಅಲ್ಲ
· ಬಸವರಾಜ್ ಹುಕ್ಕೇರಿ ಅವರು ನಿರ್ದೇಶಿಸಿದ ಪರ್ಫೆಕ್ಟ್ ಮಿಸ್-Match
· ಸುದರ್ಶನ್ ಮೇಲುಕೋಟೆ ಅವರು ನಿರ್ದೇಶಿಸಿದ ಆಷಾಢದಲ್ಲಿ ಅಳಿಯ
ನಾಟಕಗಳು ಎಲ್ಲರನ್ನು ರಂಜಿಸಿದವು. ನಾಟಕಗಳನ್ನು ನಿರ್ದೇಶಿಸಿದ ಎಲ್ಲಾ ನಿರ್ದೇಶಕರಿಗೂ , ನಟನಟಿಯರಿಗೂ ಹಾಗು ಇತರೆ ತಾಂತ್ರಿಕ ವರ್ಗದವರಿಗೂ ಧನ್ಯವಾದಗಳು. ನಾಟಕಗಳನ್ನು ಆಯ್ಕೆ ಮಾಡಿ, ನಾಟಕೋತ್ಸವದಂದು ನಾಟಕಳನ್ನು ವೀಕ್ಷಿಸಿ,
· ಅತ್ಯುತ್ತಮ ವೇಷ ಭೂಷಣ
· ಅತ್ಯುತ್ತಮ ರಂಗ ಸಜ್ಜಿಕೆ
· ನಟರತ್ನ-ನಟ (ಅತ್ಯುತ್ತಮ ನಟ)
· ನಟರತ್ನ -ನಟಿ (ಅತ್ಯುತ್ತಮ ನಟಿ)
· ಕಲಾರತ್ನ (ಅತ್ಯುತ್ತಮ ನಿರ್ದೇಶಕ)
· ರಜತಕಮಲ - ನಾಟಕ
· ಸ್ವರ್ಣ ಕಮಲ - ನಾಟಕ
ಪ್ರಶಸ್ತಿದಾರರನ್ನು ಆಯ್ಕೆ ಮಾಡಿದ ನಾಟಕದ ತೀರ್ಪುಗಾರರಾದ ಸುದರ್ಶನ್ ಚಲನ್, ಅರುಣ್ ಮಾಧವ್ ಹಾಗೂ ಸುಮಾ ಸುಬ್ಬು ಅವರಿಗೆ ಹೃತ್ಪೂರ್ವಕವಾದ ವಂದನೆಗಳು. ಈ ಭಾರಿ ಆರಂಭಿಸಿದ ವೀಕ್ಷಕರ ಆಯ್ಕೆ ಪ್ರಶಸ್ತಿಗಳನ್ನು ಸಭೆಯಲ್ಲಿದ್ದ ವೀಕ್ಷಕರು ಆನ್ ಲೈನ್ ನಲ್ಲಿ ಮತ ಚಲಾಯಿಸಿ ಆಯ್ಕೆ ಮಾಡಿದರು
· ವೀಕ್ಷಕರ ಆಯ್ಕೆ - ನಾಟಕ
· ವೀಕ್ಷಕರ ಆಯ್ಕೆ - ನಿರ್ದೇಶಕ
ವೀಕ್ಷಕರ ಆಯ್ಕೆ ಮತ ಚಲಾವಣೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗು ಧನ್ಯವಾದಗಳು
ನಾಟಕೋತ್ಸವ ೨೦೨೨ರ ಫಲಿತಾಂಶ
· ಅತ್ಯುತ್ತಮ ವೇಷ ಭೂಷಣ - ಪರ್ಫೆಕ್ಟ್ ಮಿಸ್- Match
· ಅತ್ಯುತ್ತಮ ರಂಗ ಸಜ್ಜಿಕೆ - ಮೋಕ್ಷ ೨.೨
· ನಟರತ್ನ-ನಟ (ಅತ್ಯುತ್ತಮ ನಟ) - ಅರವಿಂದ ರಾಮಸ್ವಾಮಿ (ಆಷಾಢದಲ್ಲಿ ಅಳಿಯ )
· ನಟರತ್ನ -ನಟಿ (ಅತ್ಯುತ್ತಮ ನಟಿ) - ಅರ್ಚನಾ ಮರಾಠೇ (ಮೋಕ್ಷ ೨.೨)
· ಕಲಾರತ್ನ (ಅತ್ಯುತ್ತಮ ನಿರ್ದೇಶಕ) - ಪವನ್ ಜಾನಕಿರಾಮ್ (ಅಷ್ಟು ಸುಲಭ ಅಲ್ಲ)
· ರಜತಕಮಲ - ಆಷಾಢದಲ್ಲಿ ಅಳಿಯ
· ಸ್ವರ್ಣ ಕಮಲ - ಮೋಕ್ಷ ೨.೨
· ವೀಕ್ಷಕರ ಆಯ್ಕೆ - ನಾಟಕ - ಆಷಾಢದಲ್ಲಿ ಅಳಿಯ
· ವೀಕ್ಷಕರ ಆಯ್ಕೆ - ನಿರ್ದೇಶಕ - ಮುರಳಿ B.L. (ಮೋಕ್ಷ ೨.೨)
ನಾಟಕಗಳ ನಡುವೆ ನಡೆದ ವಿವಿಧ ವಿನೋದಾವಳಿ ಕಾರ್ಯಕ್ರಮದಲ್ಲಿ ಸಾಕಷ್ಟು ಸದಸ್ಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಸದಸ್ಯರು ಹಾಗು ಮಕ್ಕಳು ಸೊಗಸಾಗಿ ಭಾಗವಹಿಸಿ ಎಲ್ಲರ ಮನ ಗೆದ್ದರು. ವಿಧ ವಿನೋದಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಮತ್ತು ಸದಸ್ಯರಿಗೂ ಧನ್ಯವಾದಗಳು.
ನಮ್ಮ ಸಂಘದ ಪರವಾಗಿ ಕ್ಯಾಬ್ರಿಲ್ಲೊ ಹೈಸ್ಕೂಲೀನ ಸಿಬ್ಬಂದಿಯೊಡನೆ ಕೆಲಸ ಮಾಡಿ, ನಾಟಕಗಳು ಸುಸೂತ್ರವಾಗಿ ನಡೆಯುವಂತೆ ಮಾಡಿದ ಪ್ರವೀಣ್, ನರೇನ್ ಸತ್ಯಂ ಹಾಗೂ ಸುಧೀರ್ ಶ್ರೀಧರ್ ಅವರಿಗೆ ನಮ್ಮ ಧನ್ಯವಾದಗಳು
ಕಾರ್ಯಕ್ರಮವನ್ನು ಅಡೆತಡೆಯಿಲ್ಲದೆ ನಡೆಸಿಕೊಟ್ಟ ಸ್ನೇಹ ವೊಂಟಕಲ್ ಹಾಗು ಉಷಾ ಪ್ರಶಾಂತ್ ಅವರಿಗೂ ನಮ್ಮ ವಂದನೆಗಳು. ತಾಂತ್ರಿಕ ಸಹಾಯ ಮಾಡಿದ ಸತ್ಯಪ್ರಸಾದ್ ಅವರಿಗೂ ಧನ್ಯವಾದಗಳು. ಎಲ್ಲಾ ನಾಟಕಗಳ, ಮತ್ತು ಎಲ್ಲಾ ವಿವಿಧ ವಿನೋದಾವಳಿ ಯ ಛಾಯಾಚಿತ್ರಗಳನ್ನು ಸೆರೆಹಿಡಿದ ದಿನೇಶ್ ಹನ್ಯಾಡಿ ಹಾಗು ಪ್ರಕಾಶ್ ರೆಡ್ಡಿ ಅವರಿಗೆ ನಮ್ಮ ಧನ್ಯವಾದಗಳು. ರಿಜಿಸ್ಟ್ರೇಶನ್ ವಿಭಾಗದಲ್ಲಿ ನೆರವಾದ ರಜನಿ ಗೋಪಾಲ್ ಅವರಿಗು ನಮ್ಮ ವಂದನೆಗಳು ಇದಲ್ಲದೆ, ಕಾರ್ಯಕ್ರಮಕ್ಕೆ ಆಗಮಿಸಿ, ನಾಟಕಗಳನ್ನು ಆನಂದಿಸಿ, ಕಾರ್ಯಕ್ರಮದ ಆಯೋಜಕರನ್ನು ಪ್ರೋತ್ಸಾಹಿಸಿದ ಎಲ್ಲ ಸದಸ್ಯರಿಗೆ ಹೃತ್ಪೂರ್ವಕವಾದ ಧನ್ಯವಾದಗಳು
ಕಾರ್ಯಕ್ರಮದ ಛಾಯಾಚಿತ್ರಗಳು ಇಲ್ಲಿವೆ: https://photos.app.goo.gl/6cPrzW3cHYCcboPPA
ನಮ್ಮ ಮುಂದಿನ ಕಾರ್ಯಕ್ರಮ ಯುಗಾದಿ, ಏಪ್ರಿಲ್ ೨೪, ೨೦೨೨ ರಂದು ಕ್ಯಾಬ್ರಿಲ್ಲೊ ಹೈಸ್ಕೂಲ್ನಲ್ಲಿ ಮತ್ತೆ ಭೇಟಿಯಾಗೋಣ.
ವಂದನೆಗಳು
--KCA Board
Ongoing Digital Events
Nimmallige Kannada Koota is an initiative by KCA-SC to bring members informative sessions on topics that matter through live video streaming. By members for members. Every Thrursday at 7:30pm PST. via Facebook Live and Youtube live
Sangama / ಸಂಗಮ
Download or view the annual magazine for members of Kannada Cultural Association of Southern California.
ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಸಾಂಸ್ಕೃತಿಕ ಸಂಘ, ವಾರ್ಷಿಕ ಸಂಚಿಕೆ.
